Sunday, March 8, 2009

ಸತ್-ಚಿತ್-ಆನಂದ.......ತಂದೆ-ತಾಯಿ ;ಗಂಡ-ಹೆಂಡತಿ;ಬಂಧು-ಬಳಗ ಹೆಸರಿಗೆ...
"ಸಾಯಿ" ಒಬ್ಬನೇ ಸರ್ವ ಕಾಲಕೂ,ಸರ್ವ ಜೀವಕೂ ಆಸರೆಗೆ...

ಬರಿಯ ಮಾಂಸ ತುಂಡಿನ ಈ ದೇಹದಲ್ಲಿನ ಜೀವಕೆ
ನೂರು ನಂಟುಗಳು ಬಿಗಿದು ಬಾಳ ಪಯಣಕೆ..
ಇಷ್ಟು,ಮತ್ತಷ್ಟು,ಮಗದಸ್ಟು ಆಸೆಗಳ ಬೇಡಿಕೆ
ತಿಳಿಯುವುದು ಕೊನೆಗೆ ಇವೆಲ್ಲ ಬರಿಯ ದುಖಕೆ

ಸಂಬಂಧಗಳಿಗೆ ಕಡಿವಾಣ ಹಾಕಲಿದೊಂದು ಎಚ್ಚರಿಕೆ
ಜಗ ಮಿಥ್ಯವೆಂಬ ಮಾಯೆಯ ಸೀಳಲಿದೊಂದು ಕೋರಿಕೆ
ಸತ್ಯ ಪಥದಲಿ ಸವೆಸಿ ಈ ಜನ್ಮವ , ಮಾಡದೇ ತೋರಿಕೆ
ಇದಿಲ್ಲವಾದರೆ "ಸತ್-ಚಿತ್-ಆನಂದ" ನಾವಾಗುವುದಂತೂ ಮರೀಚಿಕೆ..!!!

ನನ್ನಾತ್ಮ........ನಿಂತ ನೀರಂತೆ ಜೀವನೋದ್ದೇಶ ಸಾಗುತಿರಲು...
ಕಷ್ಟಗಳ ಮೇಲೊಂದು ಕಷ್ಟಗಳಿದಕೆ ದಾರಿಯಾಗಲು...

ಮಂಜಿನಂತೆ ಕರ್ಮಗಳು ಬೇಗ ಬೇಗ ಕರಗಲು..
ಆಸರೆಯಾಗಿ ಹರಿನಾಮವು ಸಹಕರಿಸಲು...

ಮರ್ಮವ ತಿಳಿಯಲು ತೊಳಲಾಡಿ..
ಆತ್ಮ ಜಿಜ್ಞಾಸೆಯ ಕ್ಷಣ ಕ್ಷಣವೂ ಮಾಡಿ

ದೇವಗಾಗಿ ಅತ್ತಿತ್ತ,ಸುತ್ತೆಲ್ಲ ಹುಡುಕಾಡಿ.,
ಶಾಂತಲಾದೆ ಕೊನೆಗೆ ಆತ್ಮನ ನನ್ನಲ್ಲೇ ನೋಡಿ ..!

ಅಂತರ ದೃಷ್ಟಿ.....ಬೆತ್ತಲೆಯ ಬಾಹ್ಯದೃಷ್ಟಿಯು ಜಗದೊಳು...
ಅಜ್ನಾನವೆಂಬ ಕತ್ತಲೆಯಾವರಿಸಿ ಮನದೊಳು
ಹೊತ್ತೊತ್ತಿಗೆ ಕೂಳು ಸಿಗದೇ ತತ್ತರಿಸಿದೊಳು..,
ಮನುಜ ಮಾಡುತ ಜೀವನವ ದೌರ್ಜನ್ಯದೊಳು....


ಪಾಪ-ಪುಣ್ಯ ; ಕರ್ಮ-ಪರಿಸ್ಥಿತಿಗಳ ವಿಮರ್ಶೆಗಲೆಂದೂ
ಮಾಡದೆ ,ಅವಕಾಶ ಕಲ್ಪಿಸಿ , ನಿಮ್ಮ ಬಂಧುಗಳೆಂದು...

ಕ್ಷಮೆ-ಸಹನೆ ರಾರಾಜಿಸಲಿ ಹೃದಯದಲ್ಲಿ ಎಂದೆಂದೂ
ನಂಬಿರಿ ದೃಢವಾಗಿ ಎಲ್ಲರಲ್ಲಿರುವವ "ಸಾಯಿಯೇ" ಎಂದು.....

ಸುನಾಮಿ.....ಸತತ ಸುರಿದ ಮಳೆಯಲ್ಲಿ
ಗುರುತಿಸದಾದೆ ಕಣ್ಣೀರ ಹನಿಗಳ
ಹಿಂದೆ ಮುಂದೆ ಬರುವವರ ಗಮನಿಸದಾದೆ..

ಕಹಿ ನೆನಪುಗಳ ಭೀಕರ ಗಾಳಿ
ಭಾವೊದ್ವೇಗಗಳ ಸುಳಿ
ಹೆಜ್ಜೆಯಿದಲಾರದೆ ಮನದ ತೊಯ್ದಾತದಲಿ
ಕುಳಿತುಬಿಟ್ಟೆ ಒಂದು ರಸ್ತೆ ಬದಿಯಲಿ...

ಬೇಡವೆಂದರೂ ಬೆನ್ನಟ್ಟಿ ಬರುತ್ತಿದೆ
ಸಹಿಸಲಾಗದ ನೋವಾವರಿಸುತ್ತಿದೆ
ಕ್ಷಣ ಕ್ಷಣಕ್ಕೂ ದೇವನ ಮೊರೆಹೊಕ್ಕುತ್ತಿದೆ

ಅಮ್ಮ ತುಂಬಿದ ಆತ್ಮಸ್ಥೈರ್ಯ,ವಿಶ್ವಾಸ
ಪುಟ್ಟ ತಂಗಿಯ ಮೊಗದ ಮಂದಹಾಸ
ಸಾಕೆನಗೆ ಮಾಡಲು ಹೆದರದೆ ಸಾಹಸ..

ಎದುರಿಸದೆ ಕಷ್ಟಗಳ ಹೆದಿಯಾಗಲಾರೆ..
ಮಾತಿನಿಂದಲೇ ಚುಚ್ಚುವವರ ದ್ವೆಶಿಯಾಗಲಾರೆ
ಮುಂದಿಟ್ಟ ಹೆಜ್ಜೆಯ ಹಿಂದೆಗೆಯಲಾರೆ.....

ಅಜ್ಞಾನ....ಸುತ್ತಲೂ ಹೆಣೆದುಕೊಂಡ ಬಲೆಗೆ
ತಾನೇ ಕಾರಣವಾದರೂ ಜೇಡ
ಇದನರಿಯದೆ ಮುಂದುವರೆಸಿ
ಹೊರಬರಲು ತೊಳಲಾಡಿ
ಸಾಯುವುದು ಅದರಲ್ಲೇ...


ಹೊರತಲ್ಲ ಮನುಜ ಇದಕೆ
ಆಸೆ,ಕನಸುಗಳ ಹೊತ್ತ
ತನ್ನದೇ ಸಾಮ್ರಾಜ್ಯದಲ್ಲಿ
ಅಸ್ಪಸ್ಥ,ಅಸ್ಥಿರ ನಿದ್ರಾಲೋಕದಲ್ಲಿ
ಕೇವಲ ಕಲ್ಪನೆಗಳಿಂದ ಸುಖಿಸಿ
ನೈಜ ಜೀವನಕ್ಕೆ ಹೆದರಿ
ದೇವರ ಶಪಿಸಿ ಬಾರಿ ಬಾರಿ.....

ನೋಡುವರು ಆಕಾಶದತ್ತ
ಸೂರ್ಯನಬೆಳಕಿರಲಿ ಚಂದಮನೂ
ತನ್ನ ಬೆಳದಿಂಗಳ ಇವರೆಡೆಗೆ
ಕಾತುರದಿಂದ ನೀಡಲು ಅಡಿಗಡಿಗೆ
ಸನಿಹ ಬಂದರೂ,ಮನುಜ ತನ್ನ
ಬಲೆಯಿಂದ ಬರದಾದನು ಹೊರಗೆ
ಬರಿಯ ಕತ್ತಲೆಯಲಿ ಮುಳುಗಿ
ಅಳುವುದಕೂ ನಿಸ್ಶಕ್ತನಾಗಿ
ಪಯಣಿಸುವನು ಕೊನೆಗೆ ಸ್ಥಿರವಾಗಿ....ತಪ್ಪು ಒಪ್ಪು....ತಪ್ಪು ತನ್ನದಾದರೂ ಒಪ್ಪದ ಮನಸು
ಸುಳ್ಳಿನಿಂದಲೇ ಮರೆಮಾಚಿ
ತನಗೆ ತಾನೆ ನಾಚಿ
ಅಂಜಿಕೆ ,ಪಾಪಭೀತಿಗಳ ಗೀಚಿ
ಮಾದುತಲಿಹುದು ಅವಳ ಹುಚ್ಚಿ

ಅಂತರಗಕ್ಕೆ ಅರಿವಾದರೂ;
ನಟನೆಗಾಕೆ ಗುರುವಾದರೂ;
ಅವಳದನ ಗುರುತಿಸದಂತಿದ್ದರೂ
ಇರಲಾರನೆ ಮೇಲೊಬ್ಬ
ಇಳಿಸಲು ಇವಳ ಕೊಬ್ಬ?

Saturday, March 7, 2009

ಹಿಂಸಾಚಾರ - ಮುಕ್ತಿ ಎಂದು ????

"ದಯೆಯೇ ಧರ್ಮದ ಮೂಲವಯ್ಯ"
ಎಂದವರು ಬಹು ಹಿಂದೆ ದಾಸರು..
"ಕೊಲೆಯೆ ಧರ್ಮದ ನೀತಿಯಯ್ಯ"
ಎಂದವರು ಈಗಿನ ಪೊಲೀಸರು


ಹಸುಗೂಸು,ಸ್ತ್ರೀ,ಯುವ ಜನಾಂಗವು ಕಾಶ್ಮೀರದಲ್ಲಿ
ಕೊಲೆಪಾತಕರ ಗುಂಡೇಟಿಗೆ,ಭಯದಲ್ಲಿ
ಅಡುಗಿ,ನಡುಗಿ ಹೋಗುವರು ;ಬದುಕಲ್ಲಿ
ಆಸೆಗಳ ಕತ್ತರಿಸಿ,ತತ್ತರಿಸುವರು,ಜೀವದ ಹೆನಗಾತದಲ್ಲಿ...

ಭಯೋತ್ಪಾದಕ-ಪೊಲೀಸರ ಹೋರಾಟದಲ್ಲಿ
ಕೆಲವರ ಶರೀರವು ನೆತ್ತರ ಸ್ನಾನದಲ್ಲಿ
ಇನ್ನು ಕೆಲವರು ಜೀವದಾಸಇಂದ ಆಸ್ಪತ್ರೆಯಲ್ಲಿ
ಮಿಕ್ಕವರು ಸ್ಮಶಾನದಲ್ಲಿ ತಿರುಗಿ ಬರಲಾರದ ಲೋಕದಲ್ಲಿ....

ಧರ್ಮಪಾಥ ಕಲಿಸಲು ಹೊರಟ ಪೊಲೀಸರು
ಅದಕ್ಕೊತ್ತು ನೀಡಿದರೆ ಅರ್ಥವಿಲ್ಲವೆನ್ದರಿತರು..
ತಾವೂ ಭಯೋತ್ಪಾದಕರ ಹಾದಿಯೇ ಹಿಡಿದರು..
ರೋಷದಿಂದ,ಕರ್ತವ್ಯ ಪ್ರಜ್ಞೆ ಇಂದ ಅವರ ಚಚ್ಚ್ಚಿದರು

ಇದರಲ್ಲಿ ಮುಗ್ಧರಾಗುವರು ನುಚ್ಚ್ಚು ನೂರು
ಕಾರಣ ಇದಕ್ಕೆಲ್ಲ ಆ ನಯವನ್ಚಕರು..
ಪರಿಹಾರ ಇಲ್ಲವೇ?? ಉತ್ತರಿಸಲು ನಾಯಕರು..
ಪ್ರಶ್ನೆಗಳಿಗೆ ಬೆನ್ನು ಕೊಟ್ಟು ಕೂರುವ ಮೂಗರು..

ಕಾಶ್ಮೀರ ನಾಯಕರುಗಳು ಹಾಗಿರಲಿ,

ಈಗ ಮನೆ ಮನೆಯೂ , ಮನ ಮನವೂ ಕಾಶ್ಮಿರದಲಿ

ಇರುವಂತೆ ಹೊದೆದಾತದಲಿ,ನೋವಲಿ,ದುಖದಲಿ

"ಏಳಿ,ಎದ್ದೇಳಿ.." ವಿವೇಕಾನಂದರ ವಾಣಿ ಕಿವಿಯಲಿ

ಸುದೃಢ ಕನಸು ಕಣ್ಣಲ್ಲಿ- ಹುಮ್ಮಸ್ಸು,ಧೈರ್ಯ ಮನದಲಿ

ಧರ್ಮಕ್ಕೆ ಹೆಸರಾದ ಭಾರತ ಭೂಮಿಯಲ್ಲಿ

ನವಯುವ ಜನಾಂಗವು ಸಾಗಬೇಕು ಸತ್ಯಪಥದಲಿ

ನಿರೀಕ್ಷಿಸಬಹುದಾಗ ಭಾವ್ಯಜೀವನವ"

ವಿಶ್ವ ಕುತುಮ್ಬಿಗಲಾಗಿ .,ಅಭಿನವ

ಭಾರತೀಯರೆಂದು ಹೆಮ್ಮ ಪಡುವ

ಬದುಕು ನಮ್ಮದಾಗಲೆಂದು ಆಶಿಸುವ

ನಿಮ್ಮ,

ಸಾಯಿಶ್ರೀ

ಚುಟುಕ....ನಾನೊಂದು ಕಡಲಂತೆ
ಮೇಲೆ
ನಗುವಿನ ಅಲೆಗಳು
ಒಳಗೆ
ಅಗ್ನಿಪರ್ವತಗಳು.....

ಜೀವನದಾಟ....ಕೊಚ್ಚೆಯಲಿ ಹಾಕುವ ಪರಿಸರ ಸುತ್ತಮುತ್ತ
ಅರಿವಿಲ್ಲದಂತೆ ಮನುಜ ಪಡುವ ಪ್ರಾಯಶ್ಚಿತ್ತ
ಕರಗಿಸಲು ಪಾಪವನು ಸಹಕರಿಸಿ ಚಿತ್ತ
ತಿಳಿಯಲು ಅವಳ ಆಟದಲಿ ಇದೆಲ್ಲ ನಿಮಿತ್ತ


ಆಡದೆ ವಿಧಿಯಿಲ್ಲ ,ಪಾತ್ರಧಾರಿಗಳೇ ಎಲ್ಲ
ಯಮ-ನಿಯಮಗಳ ಪಾಲಿಸದೇ ಆಟವೇ ಇಲ್ಲ
ಜಯಾಪಜಯಗಳ ಮಾತೆಗೆ ಒಪ್ಪಿಸಿ
ಸೂತ್ರಧಾರಲು ಕೈ ಹಿಡಿದು ನಡೆಸುವಳು


ಪ್ರತಿ ಜೀವಿಗೂ ತಿದ್ದಿ ಹೇಳುತ
ಕಗ್ಗಲ್ಲಿಗೂ ಕರುಣೆಯ ನೀಡುತ
ಸುಂದರ ಶಿಲ್ಪವಾಗಿ ನಮ್ಮೆ ತೀದುತ
ಮೋಕ್ಷವ ನೀಡುವಳು ಸಾಯಿಮಾತ,ಜಗನ್ಮಾತ,ಶ್ರೀಮಾತಾ....


ಯೌವ್ವನ.... ವರವೋ ಶಾಪವೋ??ಚಿಕ್ಕವಳಿದ್ದಾಗ ಆಡಿದ ಕುಂಟೆಬಿಲ್ಲೆ

ಜೂಟಾಟ..ಬೂಟ್ ಆಟಗಳು ;

ಮಳೆ ಬಂದಾಗ ಹಿಡಿಯಲೆತ್ನಿಸಿದ ಕಾಮನಬಿಲ್ಲೆ,

ಬಾಲ್ಯದ ಸವಿನೆನಪುಗಳು.ಯೌವ್ವನಕ್ಕೆ ಕಾಲಿಟ್ಟ ಕ್ಷಣ

ಬದಲಾಯ್ತು ಜಗ ಕ್ಷಣ ಕ್ಷಣ

ಇದು ವರವೋ ಶಾಪವೋ ಕಾಣೆ..

ನನಗಂತೂ ಶಾಪವೇ ದೇವರಾಣೆ..ನೋಡುವವರ ದೃಷ್ಟಿ ಬದಲಾಯ್ತು

ಮನದ ಭಾವಗಳು ಬದಲಾಯ್ತು

ಮನಸ್ಸಿಲ್ಲದ ಮನಸಿನಲಿ ಹೆಣಗಾಯ್ತು

ಹಸಿ ಹೃದಯ ಹುಸಿಯಾಯ್ತು...ಭಾವನೆಗಳು-ಸಂಬಂಧಗಳು ಇವೆರಡ್ಕ್ಕಿರುವ ನಂಟು

ಬಿಡಿಸಲಾರ ಸ್ವತಃ ದೇವನೇ..ಕಾರಣ ಇದು ಬ್ರಹ್ಮ ಗಂಟುಇದಕ್ಕೆ ಇಲ್ಲದ ಅರ್ಥ ಕಲ್ಪಿಸಿ ಅಪಾರ್ಥ

ಮರೆಯುತಿಹರು ಮನುಜರು ಪುರುಷಾರ್ಥ

ಬಿಸುತುತಿಹರು ಬುಡದಿಂದ ಪಾರಮಾರ್ಥ

ನೋಯಿಸಿ ಇತರರ ,ಮೆರೆದು ತಂತಮ್ಮ ಸ್ವಾರ್ಥ...ಸುಸ್ತಾದೆ, ಇವರ ತಿದ್ದಲೆತ್ನಿಸಿ,

ಬಸವಲಿದೆ ಇವರೆದುರು ಧೈರ್ಯ ಸಾಧಿಸಿ

ಮುನ್ನುಗ್ಗಿ ಮನ ತಟ್ಟುವ ರೀತಿ

ಹೇಳಿದರೂ ಬದಲಾಗಲಿಲ್ಲ ಇವರ ನೀತಿಸಾಮಾಜಿಕ ಕರ್ತವ್ಯದ ಆಲೋಚನೆಯೂ

ಮನದೊಳಗಿನ ನೋವಿನ ಉಪಶಮನವು

ಆದರೂ ದುಖಃ ಉಮ್ಮಳಿಸಿ ಬರುವುದು

ಬಿಕ್ಕಳಿಸಿ ಕಣ್ಣಾಲಿಗಳು ಹನಿಗೂದುವುದು..ಹೇಳಲಾಗದ ಪರಿಸ್ಥಿತಿಗಳು

ಗಬ್ಬೆದ್ದುಹೋದ ಭಾವನೆಗಳು

ಬರಬಾರದು ಯಾರಿಗೂ ಇಂಥ ಕಷ್ಟಗಳು

ತಿರುಗಿ ನೋಡಲಾಗದ ವಿಷ ಘಳಿಗೆಗಳು...ಆಶಾವಾದಿ ನಾನು, ನಿತ್ತುಸಿರೆಲೆಯಲಾರೆ

ಇದಕ್ಕೆಲ್ಲ ಹೆದರಿ ಹೆದಿಯಾಗಲಾರೆ

ದೇವಾಧಿದೇವ ಶ್ರೀ ಸಾಯಿನಿಹನೆದೆಯಲ್ಲಿ

ಕಣ್ರೆಪ್ಪೆಯಂತೆ ಕಾಯುವನು ಅವನಾತದಲ್ಲಿಕೆತ್ತದಾಯ್ತೆಂದು ಕೊರಗದೆ

ಬಿಡಲಾರೆ ಚಲವ ಸಾಧಿಸದೆ

ಭಾಗ್ಯವು ಬಂದಿದೆ ಬಯಸದೆ..

ಹರಿಯುತಿಹುದೆನ್ನ ಮೇಲೆ ಸಾಯಿಸುಧೆ..ಜೀವನದುದ್ದಕ್ಕೂ ಇಡೀ ರೀತಿಯೇನೂ???

ಬರಿಯ ಯೌವ್ವನಕ್ಕಷ್ಟೇ ಅಲ್ಲ ಈ ಗೋಲು

ಮಾಡುತ ಎಲ್ಲವ ಮಾನವ ದಾನವನಾಗಿ,ಹಾಲು

ಇಡೀ ಮುಂದುವರೆದರೆ ಭವ್ಯ ಭಾರತವಾಗುವುದು ಪಾಲುವ್ಯಕ್ತಿತ್ವ ಮೌಲ್ಯ ಕುಸಿತವೇ - ಕೊರತೆ

ಪಾಪ ಪರಿಜ್ಞಾನವಿರಲಿ - ಜಾಗ್ರತೆ

ಬಾಳುವ ಒಂದಾಗಿ ಹೀಗೆ - ಸಾಯಿ ಸುತ,ಸುತೆ.

ಬೆಳೆಸಿ,ಹಂಚಿ,ಸುಖಿಸಿ,ಪ್ರೀತಿ,ಮಮತೆ