Sunday, March 8, 2009
ಸತ್-ಚಿತ್-ಆನಂದ.......
ತಂದೆ-ತಾಯಿ ;ಗಂಡ-ಹೆಂಡತಿ;ಬಂಧು-ಬಳಗ ಹೆಸರಿಗೆ...
"ಸಾಯಿ" ಒಬ್ಬನೇ ಸರ್ವ ಕಾಲಕೂ,ಸರ್ವ ಜೀವಕೂ ಆಸರೆಗೆ...
ಬರಿಯ ಮಾಂಸ ತುಂಡಿನ ಈ ದೇಹದಲ್ಲಿನ ಜೀವಕೆ
ನೂರು ನಂಟುಗಳು ಬಿಗಿದು ಬಾಳ ಪಯಣಕೆ..
ಇಷ್ಟು,ಮತ್ತಷ್ಟು,ಮಗದಸ್ಟು ಆಸೆಗಳ ಬೇಡಿಕೆ
ತಿಳಿಯುವುದು ಕೊನೆಗೆ ಇವೆಲ್ಲ ಬರಿಯ ದುಖಕೆ
ಸಂಬಂಧಗಳಿಗೆ ಕಡಿವಾಣ ಹಾಕಲಿದೊಂದು ಎಚ್ಚರಿಕೆ
ಜಗ ಮಿಥ್ಯವೆಂಬ ಮಾಯೆಯ ಸೀಳಲಿದೊಂದು ಕೋರಿಕೆ
ಸತ್ಯ ಪಥದಲಿ ಸವೆಸಿ ಈ ಜನ್ಮವ , ಮಾಡದೇ ತೋರಿಕೆ
ಇದಿಲ್ಲವಾದರೆ "ಸತ್-ಚಿತ್-ಆನಂದ" ನಾವಾಗುವುದಂತೂ ಮರೀಚಿಕೆ..!!!
Subscribe to:
Post Comments (Atom)
3 comments:
"ಬರಿಯ ಮಾಂಸದ ತುಂಡಿನ ಜೀವಕೆ ನೂರು ನಂಟುಗಳ ಬಿಗಿದು ಬಾಲ ಪಯಣಕೆ" ಬಹಳ ಚೆನ್ನಾಗಿದೆ ಸಾಲು... ಮಗದಷ್ಟು, ದುಃಖ ಎರಡು ಪದಗಳ ಸರಿ ಮಾಡಿ...
ಸತ್-ಚಿತ್ ಆನಂದ...ನಿಮಗೆ ನಿಜಕ್ಕೂ ಆನಂದ ಕೊಡಲಿ ಎಂದೇ ಹಾರೈಕೆ..
ಅಧ್ಯಾತ್ಮಕ್ಕೆ ಹೆಚ್ಚು ಒಲವಿದ್ದಂತೆ ತೋರುತ್ತೆ...ಒಳ್ಳೆಯದೇ..
ಆದರೆ ಜೀವನವನ್ನು ಜೀವಿಸಬೇಕು ಜೀವಿಸಲು ಜೀವವಲ್ಲ ...ಚನ್ನಾಗಿವೆ ಸಾಲುಗಳು..
ಮುಂದುವರೆಯಲಿ..ನಿಮ್ಮ ಭಾವಮಂಥಕೆ ಸ್ವಲ್ಪ ಲವಲವಿಕೆ ಬಂದರೆ ನಮಗೂ ಖುಷಿ..
Dear Jalanayana,
Thanks for the compliments and encouraging words... taken your comments and sure you will see the "lavalavike" going forward
Cheers;-)Geetha
Post a Comment