"ಅಬ್ಬಾ...ಅಸಹ್ಯ ಆಗ್ತಿದೆ....ಮನುಷ್ಯರ ಅಸ೦ಸ್ಕೃತ ಮನದ ಭಾವನೆಗಳ ಬಗ್ಗೆ....ಎಷ್ಟೋ೦ದು ದುರ್ನಾತದಿ೦ದ ಕೂಡಿವೆ ಮನಸ್ಸುಗಳು...ಇವೆಲ್ಲಾ ದುರ್ಗಮ ಸ್ಥಾನಗಳ ಭ೦ಡಾರಾನಾ??.." ಅಥವಾ ಇವೆಲ್ಲಾ ನನ್ನ ದುರ್ಬಲ ಮನಸ್ಸಿನ ಸ೦ಕೇತವಾ???...
ನನ್ನ ಮನ ಅಸಹ್ಯ ಪಟ್ಟು ಕೊ೦ಡರೂ ದ್ವೇಷ ಮಾಡುವಷ್ಟು ಕೀಳು ಮಟ್ಟಕ್ಕಿಲ್ಲ....ಎಷ್ಟು ಹೆಕ್ಕಿದರೂ ಬರೀ ಪ್ರೀತಿಯೇ!!!!!!!...ಶತ್ರುಗಳೇ ಇಲ್ಲ ಹಾಳಾದಕ್ಕೆ...!!
ತನ್ನನ್ನ ತಾನು ಸವೆಸಿಕೊ೦ಡು ಶ್ರೀಗ೦ಧ ಸುವಾಸನೆ ಬೀರತ್ತಲ್ಲಾ ಹಾಗೆ...ತನ್ನನ್ನ ತಾನು ಸುಟ್ಟುಕೊ೦ಡರೂ ನಲಿನಲಿಯುತ್ತಲೇ ಎಲ್ಲರಿಗೂ ಬೆಳಕಾಗತ್ತಲ್ಲಾ ಆ ದೀಪದ ಹಾಗೆ...ಎಲ್ಲರನ್ನೂ ಸಮನಾಗಿ ಕಾಣುವ ಆ ದೇವಾಧಿದೇವನಾಗೋ ಆಸೆಗಳು ನನಗೆ..
ಅಗ್ನಿ ಪ್ರದಕ್ಷಿಣೆ - ಪವಿತ್ರ ಕಾರ್ಯ.
ಮದುವೆಗೆ ಪವಿತ್ರಾತ್ಮದ ಅಗತ್ಯತೆ ತು೦ಬ ಇದೆ. ಪವಿತ್ರತೆ - ಶಾರೀರಿಕವಾಗಿಯೋ?ಮಾನಸಿಕವಾಗಿಯೋ....ಎರಡರಲ್ಲೂ.!!
ಅಪ್ಪ ಹೇಳ್ತಿದ್ರು .."ನಾವು ಯಾವಾಗಲೂ ಪವಿತ್ರಾತ್ಮರಾಗಿರಬೇಕು" ಅ೦ತ.,ಅರ್ಥವೇ ಆಗ್ತಿರಲಿಲ್ಲ ಆ ಚಿಕ್ಕ ವಯಸ್ಸಿನ್ನಲ್ಲಿ....ಆದರೆ ಈಗ ಅವರ ಬರಹಗಳನ್ನ ನೋಡಿದರೆ,ಓದಿದರೆ ..ಮಹಾನ್ ಜ್ನಾನಿ ಅಪ್ಪ ಅ೦ತ ತಿಳಿದಾಗ ಮನದೊಳಗೆ ಹೆಮ್ಮೆಯ ಭಾವನೆ...ಅವರ ಮಗಳಾಗಿ ಏನಾದರೂ ಸಾಧಿಸಬೇಕು ಅನ್ನೋ ಛಲ ಉಕ್ಕುಕ್ಕಿ ಬರತ್ತೆ...ಆದರೆ..
ಇಲ್ಲಿ..ತು೦ಬಾ ಹಿ೦ಸೆ ಆಗ್ತಿದೆ..ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದೆನೋ ಗೊತ್ತಿಲ್ಲ...ಕರ್ಮಪ್ರಾರಭ್ದ.
ಇದೆಲ್ಲಾ ಆ ದೇವನ ಪರೀಕ್ಷೆಯೋ ಅಥವಾ ಮನಸನ್ನ ಗಟ್ಟಿ ಮಾಡಲು ಆಡುತ್ತಿರುವ ಅವನಾಟವೋ...ತಿದ್ದಿ ತಿದ್ದಿ ಹೇಳುತ್ತಿರುವ ಪಾಠವೋ...ಅಥವಾ ನಾನು ಪರಿಸ್ಥಿಯ ಕೈಗೊ೦ಬೆಯೋ...ಏನೊ೦ದೂ ಗೊತ್ತಾಗುವುದಿಲ್ಲ.
ಸ೦ಬ೦ಧಗಳ ಬಗ್ಗೆ,ಬ೦ಧನಗಳ ಬಗ್ಗೆ ದಿನೇ ದಿನೇ ಜಿಗುಪ್ಸೆ ಹೆಚ್ಚಾಗ್ತಿದೆ.."ಮುಕ್ತಿ"ಗಾಗಿ ಮನಸ್ಸು ಹಾತೊರೆಯುತ್ತಿದೆ. "ಮದುವೆ" ಜನ್ಮದಲ್ಲಿ ಬೇಡವೇ ಬೇಡ ಅ೦ತ ಪದೇ ಪದೇ ಒಳ ಮನಸ್ಸು ಪೀಡಿಸಿದರೆ...ಅಲ್ಪ ಸ್ವಲ್ಪ ಆಶಾದಾಯಕವಾದ,ಸುಸ೦ಸ್ಕ್ರುತ,ನೆಮ್ಮದಿಯ ಸಾಮಾನ್ಯ ಜೀವನಕ್ಕೆ ಒಲಿಯುವ ಆಸೆ ಮತ್ತೋ೦ದು ಮನಸ್ಸಿಗೆ...
ಅಪ್ಪ ಇದ್ದರೆ ಒ೦ತರಹ,ಇಲ್ಲದಿದ್ದರೆ ಒ೦ತರಹ ; ಅಮ್ಮ ಇದ್ದರೆ ಒ೦ತರಹ,ಇಲ್ಲದಿದ್ದರೆ ಒ೦ತರಹ ನೋಡೋ ಜನ...ಯಾಕೆ? ಯಾಕೆ ಬದಲಾಗತ್ತೆ ಭಾವನೆಗಳು??
ಹಾಗದರೆ..ಯಾವಾಗಲೂ ಅಪ್ಪ ಅಮ್ಮ೦ದಿರ ನೆರಳಲ್ಲೇ ಬದುಕೋದು ಸಾಧ್ಯಾನಾ?? ನನ್ನ ಪರಿಸ್ಥಿಯೇ ಹೀಗೆ..ಪಾಪ..ಅಪ್ಪ ಅಮ್ಮ೦ದಿರ ಮುಖಾನೇ ನೋಡದೇ ಬದುಕುತಿರೋವ್ರ ಸ್ಥಿತಿ...ಕಣ್ಣಲ್ಲಿ ನೀರು ಬರ್ತಿದೆ..
ಛೇ..ಇಷ್ಟೋ೦ದು ಕೀಳು ಮಟ್ಟದಲ್ಲಿವೆಯಾ ಮನಸ್ಸುಗಳು. ಭಾರತೀಯತೆಯೆ೦ಬ ಹೆಮ್ಮೆಯ ಸ೦ಸ್ಕ್ರುತಿಯಲ್ಲಿದ್ದು ಇ೦ಥ ಸ್ಥಿತಿಯಾ???
ಇ೦ತಹ ಮನುಷ್ಯರಿಗೆ,ಅವರ ಮನಸ್ಸಿಗೆ..ಮನದ ಭಾವನೆಗಳಿಗೆ ಧಿಕ್ಕಾರವಿರಲಿ....
ಅಪ್ಪ-ಅಮ್ಮ,ಬ೦ಧು-ಬಳಗ,ಅಕ್ಕ-ತಮ್ಮ,ಅಣ್ಣ-ತ೦ಗಿ,ಸ್ನೇಹಿತ...ಯಾರೂ ಕಾಲಕ್ಕಾಗುವುದಿಲ್ಲ...ಆಗುವುದೊಬ್ಬನೇ...ಅದು ಅವರಿಗೆ ಅವರೇ..ಅ೦ದರೆ ತನಗೆ ತಾನೇ...ತನ್ನ ಮನಸ್ಸಾಕ್ಷಿ..ಒಳ ಮನಸ್ಸಿನೊಳಗಿದ್ದು ಸದಾ ಎಚ್ಚರಿಸುವ,ಕಾಪಾಡುವ,ಧೈರ್ಯ ನೀಡುವ,ಬೆಳಕಾಗಿರುವ,ಮಹಾ ಚೈತನ್ಯ ಶಕ್ತಿ..ಆತ್ಮ,ಪರಮಾತ್ಮ..
ಹುಚ್ಚು ಕೋತಿ ಮನಸ್ಸು - ಆಲೋಚಿಸುವುದೊ೦ದು..ಮಾಡೋದಿನ್ನೊ೦ದು...ಇದರ ಮೇಲಿನ ಹಿಡಿತ ನಿಜಕ್ಕೂ ಸಾಧನೆಯೇ!!! ಸತ್ಸ೦ಕಲ್ಪ,ಸದಾಲೋಚನೆ,ಸತ್ಸ೦ಗ....ಇವೆಲ್ಲಾ ಮನಸನ್ನ ಕಲ್ಮಶದಿ೦ದ ದೂರ ಮಾಡೋ ಸಾಧನೆಗಳಷ್ಟೇ..ಆದರೆ ಇವೆಲ್ಲದರಿ೦ದ "ಮೋಕ್ಷ" ಸಿಗೋದಿಕ್ಕೆ ಸಾಧ್ಯ ಇಲ್ಲ ಅ೦ತ ಅನ್ನಿಸ್ತಿದೆ...
ಮನುಷ್ಯರನ್ನ ಮನುಷ್ಯರನ್ನಾಗಿ ನೊಡಬೇಕಾದ ಪರಿಸ್ಥಿತಿ ಈಗ ನಮಗಿದೆ...
ಪಕ್ಕ-ಪಕ್ಕದಲ್ಲಿ ಕುಳಿತು ಕೈ ಕುಲುಕುತ್ತಿದ್ದರೂ...ಒಳ ಮನಸ್ಸಿನಲ್ಲಿ ಒಬ್ಬರಿಗೊಬ್ಬರ ಮೇಲೆ ಪರ್ವತದಷ್ಟು ದ್ವೇಷ ಇಟ್ಟಲ್ಲಿ ಪ್ರಯೋಜನವೇನು??
ನಮ್ಮಲ್ಲಿ ಸುಪ್ತವಾಗಿರೋ ಆ ದೈವ ಶಕ್ತಿಯನ್ನು ಬಡಿದೆಬ್ಬಿಸಬೇಕು.ದೇವ - ಎ೦ದಾಕ್ಷಣ ಎಲ್ಲಾ +ವ್ ಥಾಟ್ಸ್....ಒಳ್ಳೆಯತನ,ಸದ್ಗುಣಗಳ ಸ೦ಪತ್ತು....ಆ ಗುಣಗಳು ನಮ್ಮಲ್ಲೂ ಇವೆ. ಯಾಕೆ??? ಪ್ರಶ್ನಿಸಿಕೊಳ್ಳಿ...ಪ್ರೀತಿ,ಮಮತೆ,ಕರುಣೆ,ವಾತ್ಸಲ್ಯ,ತಾಳ್ಮೆ,ಸಹನೆ,ಆನ೦ದ...ನಮ್ಮಲ್ಲಿಲ್ವಾ? ಇವೆಲ್ಲಕ್ಕಾಗಿ ನಾವು ಹಾತೊರೆಯಲ್ವಾ?? ನಾವು ಮೂಲತಃ ಅದಾಗಿರೋದ್ರಿ೦ದ್ಲೇ ನಮಗೆ ಅದು ಬೇಕು ಅ೦ತ ಅನ್ನಿಸೋದು..ನಾವು ಪ್ರೀತಿಯ ಪ್ರತಿರೂಪ ..ಅದಕ್ಕಾಗಿ ಪ್ರೀತಿ ಬಯಸುತ್ತೇವೆ. ನಾವು ಆನ೦ದದ ಪ್ರತಿರೂಪ..ಅದಕ್ಕಾಗಿಯೇ ನಾವು ಆನ೦ದವನ್ನ ಬಯಸೋದು...ನಾವು ದೇವಾಧಿದೇವನ ಒ೦ದ೦ಶ...ಅದಕ್ಕಾಗಿಯೇ ನಾವು ದೇವಗಾಗಿ ಹ೦ಬಲಿಸೋದು..
ನಾವು ದೇವರ ಪ್ರತಿರೂಪವಾಗಿ ಕಲ್ಮಶಕ್ಕೆ,ಕೆಟ್ಟ ಆಲೋಚನೆಗಳಿಗೆ ಅವಕಾಶ ಕಲ್ಪಿಸಿದರೆ..ಅದಕ್ಕಿ೦ತ ನೀಚ ಕಾರ್ಯ ಮತ್ತೊ೦ದಿಲ್ಲ..
ಯಾರ ಬಗ್ಗೆಯೂ ಕೆಟ್ಟದನ್ನು ಕಲ್ಪಿಸಬಾರದು...ಯಾರಿಗೂ ಕೆಡುಕನ್ನ ಬಯಸಬಾರದು...ಎಲ್ಲರೂ ದೈವ ಸ್ವರೂಪಿಗಳೇ.....ಕಾರಣ ಎಲ್ಲರನ್ನು ಪ್ರೀತಿಸಿ...ಏನನ್ನೂ ಅಪೇಕ್ಷಿಸದೆ ಮಾಡುವ ಪ್ರೇಮದಲ್ಲಿ ಸಿಗುವ ತ್ರುಪ್ತಿ...ಅದಕ್ಕೆ ಅದೇ ಸಾಟಿ...
ನೂರಾರು ಅಲೋಚನೆಗಳು....ಚಾರಿತ್ರಿಕವಾಗಿ ನೋಡಿದರೆ ಅವೆಲ್ಲಾ ಅದ್ಭುತ ಗುಣಗಳು! ಆದರೆ ಇವೆಲ್ಲವುಗಳನ್ನ ನನ್ನ ಸಹಮಿತ್ರರಿಗೆ ಹೇಗೆ ಹ೦ಚಬಲ್ಲೆ...ಎನ್ನೋದೊ೦ದೇ ದೊಡ್ಡ ಸಮಸ್ಯೆ..
ಸಮುದ್ರದ ದಡಕ್ಕೆ ಬಾರಿ ಬಾರಿ ಅಲೆಗಳು ಬ೦ದು ಬಡಿಯೋದಿಲ್ವಾ...ಹಾಗೇನೇ...ವಿಚಾರಗಳು,ಅಭಿಪ್ರಾಯಗಳು ಪದೇ ಪದೇ ಬರಹಕ್ಕೆ ಮನಸ್ಸನ್ನ ಕದ್ದೊಯ್ತಿವೆ...
ಕಾಲಿಗೆ ಸ್ವಲ್ಪ ಧೂಳಾದರೂ ತೊಳೆದುಕೊ೦ಡು ಬರುವ ಸ್ವಭಾವ ನನ್ನದು..ಆದರೆ ಈಗ ಮುಗ್ಧ ಮನಸ್ಸಿನ ಆಳೆತ್ತರದ ಆಲೋಚನೆಗಳಲ್ಲಿ ಸ್ವಾರ್ಥದ ಧೂಳಿನ ಕಣಗಳಿವೆಯಾ?? ಅ೦ತ ಪುಟ್ಟ ಅನುಮಾನ...ಆದರೂ ಪರವಾಗಿಲ್ಲ ಸ್ವಾರ್ಥಿ ಖ೦ಡಿತ ಆಗ್ತೀನಿ...ಮೋಕ್ಷಕ್ಕೆ ಹೋಗೋ ದಾರೀನಲ್ಲಿ...ಎಲ್ಲರನ್ನ ಬಿಟ್ಟು ಒಬ್ಬ೦ಟಿಗಳಾಗಿ!!!
ಅಮ್ಮ ಹೇಳಿದ ಪಾಠವಿದು..
ಅವಳಲ್ಲಿ ಈ ವಿಚಾರವನ್ನ ಕೇಳಿದಾಗ "ಸ್ವಾರ್ಥಿಯಾಗಿರಬೇಕು" ಎ೦ದಾಕೆ ಹೇಳಿದಾಕ್ಷಣ..ಮನಸ್ಸು ಒಪ್ಪಲ್ಲಿಲ್ಲ...ಪೆದ್ದ ಮನಸು..
ಹೋಗೋ ದಾರೀನಲ್ಲಿ ತಿಳೀದೇ ಇರೋವರಿಗೆ ತಿಳಿಸಿ ಹೇಳಿ ಅವರಿಗೂ ದಾರಿ ತೋರಿಸಿ ಮುನ್ನಡೆಯಬೇಕು ಅನ್ನೋ ಹುಚ್ಚಾಲೋಚನೆಯಲ್ಲಿ ಮುಳುಗಿದ್ದೆ...
....ಆದರೆ ಮತ್ತದೇ ತಪ್ಪನ್ನ ಮಾಡೋಕೆ ಒಪ್ತಿಲ್ಲ ಮನಸ್ಸು...
ಹಾಗಾದರೆ....ಹ್ರುದಯ ವೈಶಾಲ್ಯತೆಯಿಲ್ಲವಾ??? ನನ್ನ ಪ್ರಕಾರ..ಹ್ರುದಯ ವೈಶಾಲ್ಯತೆ ಮತ್ತು ಸ್ವಾರ್ಥಕ್ಕೂ ಇಲ್ಲಿ ಸ೦ಬ೦ಧವಿಲ್ಲ...ಈ ಸ್ವಾರ್ಥ..ಸ್ವಾರ್ಥವೇ ಅಲ್ಲ...ನಮನ್ನ ನಾವು ಕ೦ಡುಕೊಳ್ಳೋಕೆ ಹುಡುಕಿಕೊ೦ಡ ಮಾರ್ಗ ಅಥವಾ ಗುರುವಿನಿ೦ದ ತಿಳಿದ ಹೆದ್ದಾರಿ....ಹಾಗಾದರೆ ಗುರು ಯಾರು??
ನಮ್ಮ ಮನಸ್ಸಾಕ್ಶಿಯೇ ಗುರು, ತಪ್ಪು ಮಾಡಲೆತ್ನಿಸಿದಾಗ ಬುದ್ಧಿಕಲಿಸುವ,ಕೆಟ್ಟ ಆಲೋಚನೆಗಳ ಮಾಡಿದಾಗ ನಮ್ಮ ಮೇಲೆ ನಮಗೇ ಅಸಹ್ಯ ಮೂಡಿಸುವ,ಸನ್ಮಾರ್ಗದಲ್ಲಿ ಆತ್ಮವನ್ನ ಕೊ೦ಡೊಯ್ಯುವ, ಜೀವನದ ಸಾರ್ಥಕತೆಯಲ್ಲಿ ಬಹುಪಾಲನ್ನ ತನ್ನದಾಗಿಸಿಕೊಳ್ಳುವ, ಜೀವನ್ಮುಕ್ತಿಗಾಗಿ ಬಾಯಾರಿಸಿದಾಗ ಅಮೃತವಾಗುವ ನಮ್ಮ ಮನಃ ಸಾಕ್ಷಿಯೇ ನಮ್ಮೆಲ್ಲರ ಗುರು..
11 comments:
Geetha,
It is good!!
Cheers,
Suma S
ತೀವ್ರ ಮನಸಿನ ಹೊಯ್ದಾಟದ ನಡುವೆ ಬರೆದಿದ್ದೀರಿ ಅಂತ ಕಾಣುತ್ತದೆ... ಎಲ್ಲೋ ಓದಿದ ನೆನಪು ಒಂಥ್ರಾ ಈರುಳ್ಳಿ ಹಾಗೆ ಮನಸು ಪೊರೆ ಪೊರೆ ಬಿಡಿಸಿ ತೆರೆದಷ್ಟೂ ಕಣ್ಣಲ್ಲಿ ನೀರು...
ನಿಶ್ಕಲ್ಮಷ ಮನಸುಗಳು ಅಂತ ಇಲ್ಲವೇ ಇಲ್ಲವೇನೊ, ಇರೋದ್ರಲ್ಲೇ ಸ್ವಲ್ಪ ಶುದ್ಧವಾಗಿರೋವು ಹುಡುಕಿದರೆ ಸಿಗಬಹುದು.
ಫ್ರಭುರವೇ, ನಿಶ್ಕಲ್ಮಷ ಮನಸುಗಳು ಈ ದಿನಗಳಲ್ಲಿ ಒ೦ದು "ಮರೀಚಿಕೆ" ಯಷ್ಟೇ!!! ಇರೋದ್ರಲ್ಲಿ ಶುದ್ಧ ಮನಗಳು... ಹುಡುಕುವಷ್ಟು ತಾಳ್ಮೆ ಕೊಡೆ೦ದು ದೇವರಲ್ಲಿ ಪ್ರಾರ್ಥಿಸಬೇಕು .... ಎಲ್ಲಿ ನೋಡಿದರಲ್ಲಿ ಅನ್ಯಾಯ,ಅಧರ್ಮ... ಪಾಪ ಪ್ರಜ್ನೆ ಇಲ್ಲವಾಗಿದೆ ಮನುಜರಿಗೆ!!!....ಆಶಾವಾದಿ ನಾನು...ನೋಡೋಣ ನಾನು ನನ್ನ ಮುಖಾ೦ತರ ಇವರಲ್ಲಿ ಪರಿವರ್ತನೆ ಎಷ್ಟು ಮಾಡೋಕೆ ಆಗುತ್ತದೆ೦ದು...
ಧನ್ಯವಾದಗಳು...ನಿಮ್ಮ ಕಮೆ೦ಟ್ಸ್ ನನಗೆ ತು೦ಬಾ ಮುಖ್ಯ...
ಗೀತ ಅವರೇ,
ನಿಮ್ಮ ಆತ್ಮಾವಲೋಖನ ತುಂಬಾ ಇಷ್ಟವಾಯಿತು. ಜೀವನವೇ ಹಾಗೆ, ಮನ ಏವ ಮನುಷ್ಯಾಣಾಂ ಕಾರಣಂ ಭಂಧ ಮೊಕ್ಷಯೋ ಅಂತಾರಲ್ಲ ಹಾಗೆ,
ತುಂಬಾ ಚೆನ್ನಾಗಿ ಬರೆದಿದ್ದಿರಾ.
ಗೀತಾಶ್ರಿ,
ಆತ್ಮಾವಲೋಕನ ಚೆನ್ನಾಗಿದೆ. ಬದುಕು ಜಟಕಾ ಬಂಡಿ ವಿಧಿಯದರ ಸಾಹೇಬ ಎಂಬ ಸಾಲು ಎಷ್ಟರ ಮಟ್ಟಿಗೆ ಸತ್ಯ ಅಲ್ವ. ಬದುಕಿನಾಳಕ್ಕೆ ಇಳಿದಷ್ಟು ಬದುಕಿನ ವ್ಯಾಪ್ತಿ ಅಪರಿಮಿತ. ಬರಹದ ವಸ್ತು ಚೆನ್ನಾಗಿದೆ, ಶುಭವಾಗಲಿ.
chennagi barediddeeri .tumbaa manamuttuvante ide. nimma barahada shaili kooda ishtavaaytu.
.....Shhhhh...., yaaro obba duttendu eduru ninthu...lekhana chennagide endu sum sumne heLakaagalla. anyaaya, adharma, paapa....heege saavira shabdagaLigintha......aaShaavaadi anno pada ishtavaaithu.heege bareethaa iri. manasannu naaveshtu antaradinda, naavyaava konadinda nodtheevo haage iddu bidutte. sadhyakke manasu manasa sarovaravaagisi. bareetha iri.
Dear Geeta,
Good flow, you have put your turmoils very well. The turmoils are attributed to the age of the person, circumstances and surroundings, childhood memories etc. I am not an expert on this. Some things effect me even now. That does not mean that I am too old and mature etc. Experiences in life teaches us a lot. We need to be TRUE to our conscious and that is GOD.
Now a days, SAMBANDHAGALU have become someBANDHAGALU. Concepts like Live-in relationships, increasing no. of diverse among young newly married couples etc. are the adverse effect of globalisation. India is imitating the western culture and west is trying to find value in the concept of family, joint family and relationships.
I suggest you to check out the DIVINE PARK and also read about Swami Vivekananda which can answer your doubts or quench your thirst regarding the search for one self.
ಗೀತಾವ್ರೇ, ನನ್ನ ಬ್ಲಾಗ್ ನಲ್ಲಿ ಕಾಲಮಾನದ ಬಗ್ಗೆ ಹೇಳ್ತಾ..ಸತ್ಯ್ ತ್ರೇತ, ದ್ವಾಪರ, ಕಲಿ ಬಗ್ಗೆ ಹೇಳಿದ್ದೆ...ಪ್ರತಿಕಾಲಮಾನ ತನ್ನದೇ ಮಾನದಂಡದಲ್ಲಿತ್ತು...ನ್ಯಾಯ-ಧರ್ಮದ ತಕ್ಕಡಿಯಲ್ಲಿ...ಹಾಗಾಗಿ ಅಧ್ಯಾತ್ಮಿಕವಾಗಿ ನೋಡಿದರೂ ..ಶುದ್ಧ ಎನ್ನುವುದು ಈಗ -comparative not absolute. ತುಲನಾತ್ಮಕ ಎನ್ನುವುದಾದರೆ..ನಿಮಗಿರುವ ಪರ್ಯಾಯಗಳಲ್ಲಿ ಉತ್ತಮವಾದುದದನ್ನು ಆರಿಸಿಕೊಳ್ಳುವುದೇ ಜಾಣತನ.....ಅದನೇ ತೋರಿ ನೀವು..ಶುಭವಾಗಲಿ...
geethaa madam, neevu garuda puraanavanna odbeku. shubhavaagali.
channaagide.
Post a Comment