Saturday, March 7, 2009
ಯೌವ್ವನ.... ವರವೋ ಶಾಪವೋ??
ಚಿಕ್ಕವಳಿದ್ದಾಗ ಆಡಿದ ಕುಂಟೆಬಿಲ್ಲೆ
ಜೂಟಾಟ..ಬೂಟ್ ಆಟಗಳು ;
ಮಳೆ ಬಂದಾಗ ಹಿಡಿಯಲೆತ್ನಿಸಿದ ಕಾಮನಬಿಲ್ಲೆ,
ಬಾಲ್ಯದ ಸವಿನೆನಪುಗಳು.
ಯೌವ್ವನಕ್ಕೆ ಕಾಲಿಟ್ಟ ಕ್ಷಣ
ಬದಲಾಯ್ತು ಜಗ ಕ್ಷಣ ಕ್ಷಣ
ಇದು ವರವೋ ಶಾಪವೋ ಕಾಣೆ..
ನನಗಂತೂ ಶಾಪವೇ ದೇವರಾಣೆ..
ನೋಡುವವರ ದೃಷ್ಟಿ ಬದಲಾಯ್ತು
ಮನದ ಭಾವಗಳು ಬದಲಾಯ್ತು
ಮನಸ್ಸಿಲ್ಲದ ಮನಸಿನಲಿ ಹೆಣಗಾಯ್ತು
ಹಸಿ ಹೃದಯ ಹುಸಿಯಾಯ್ತು...
ಭಾವನೆಗಳು-ಸಂಬಂಧಗಳು ಇವೆರಡ್ಕ್ಕಿರುವ ನಂಟು
ಬಿಡಿಸಲಾರ ಸ್ವತಃ ದೇವನೇ..ಕಾರಣ ಇದು ಬ್ರಹ್ಮ ಗಂಟು
ಇದಕ್ಕೆ ಇಲ್ಲದ ಅರ್ಥ ಕಲ್ಪಿಸಿ ಅಪಾರ್ಥ
ಮರೆಯುತಿಹರು ಮನುಜರು ಪುರುಷಾರ್ಥ
ಬಿಸುತುತಿಹರು ಬುಡದಿಂದ ಪಾರಮಾರ್ಥ
ನೋಯಿಸಿ ಇತರರ ,ಮೆರೆದು ತಂತಮ್ಮ ಸ್ವಾರ್ಥ...
ಸುಸ್ತಾದೆ, ಇವರ ತಿದ್ದಲೆತ್ನಿಸಿ,
ಬಸವಲಿದೆ ಇವರೆದುರು ಧೈರ್ಯ ಸಾಧಿಸಿ
ಮುನ್ನುಗ್ಗಿ ಮನ ತಟ್ಟುವ ರೀತಿ
ಹೇಳಿದರೂ ಬದಲಾಗಲಿಲ್ಲ ಇವರ ನೀತಿ
ಸಾಮಾಜಿಕ ಕರ್ತವ್ಯದ ಆಲೋಚನೆಯೂ
ಮನದೊಳಗಿನ ನೋವಿನ ಉಪಶಮನವು
ಆದರೂ ದುಖಃ ಉಮ್ಮಳಿಸಿ ಬರುವುದು
ಬಿಕ್ಕಳಿಸಿ ಕಣ್ಣಾಲಿಗಳು ಹನಿಗೂದುವುದು..
ಹೇಳಲಾಗದ ಪರಿಸ್ಥಿತಿಗಳು
ಗಬ್ಬೆದ್ದುಹೋದ ಭಾವನೆಗಳು
ಬರಬಾರದು ಯಾರಿಗೂ ಇಂಥ ಕಷ್ಟಗಳು
ತಿರುಗಿ ನೋಡಲಾಗದ ವಿಷ ಘಳಿಗೆಗಳು...
ಆಶಾವಾದಿ ನಾನು, ನಿತ್ತುಸಿರೆಲೆಯಲಾರೆ
ಇದಕ್ಕೆಲ್ಲ ಹೆದರಿ ಹೆದಿಯಾಗಲಾರೆ
ದೇವಾಧಿದೇವ ಶ್ರೀ ಸಾಯಿನಿಹನೆದೆಯಲ್ಲಿ
ಕಣ್ರೆಪ್ಪೆಯಂತೆ ಕಾಯುವನು ಅವನಾತದಲ್ಲಿ
ಕೆತ್ತದಾಯ್ತೆಂದು ಕೊರಗದೆ
ಬಿಡಲಾರೆ ಚಲವ ಸಾಧಿಸದೆ
ಭಾಗ್ಯವು ಬಂದಿದೆ ಬಯಸದೆ..
ಹರಿಯುತಿಹುದೆನ್ನ ಮೇಲೆ ಸಾಯಿಸುಧೆ..
ಜೀವನದುದ್ದಕ್ಕೂ ಇಡೀ ರೀತಿಯೇನೂ???
ಬರಿಯ ಯೌವ್ವನಕ್ಕಷ್ಟೇ ಅಲ್ಲ ಈ ಗೋಲು
ಮಾಡುತ ಎಲ್ಲವ ಮಾನವ ದಾನವನಾಗಿ,ಹಾಲು
ಇಡೀ ಮುಂದುವರೆದರೆ ಭವ್ಯ ಭಾರತವಾಗುವುದು ಪಾಲು
ವ್ಯಕ್ತಿತ್ವ ಮೌಲ್ಯ ಕುಸಿತವೇ - ಕೊರತೆ
ಪಾಪ ಪರಿಜ್ಞಾನವಿರಲಿ - ಜಾಗ್ರತೆ
ಬಾಳುವ ಒಂದಾಗಿ ಹೀಗೆ - ಸಾಯಿ ಸುತ,ಸುತೆ.
ಬೆಳೆಸಿ,ಹಂಚಿ,ಸುಖಿಸಿ,ಪ್ರೀತಿ,ಮಮತೆ
Subscribe to:
Post Comments (Atom)
1 comment:
ಜೂಟಾಟ ಬೂಟಾಟಗಳು ಬಾಲ್ಯದ ನೆನಪು ತರುತ್ತವೆ, ಅದರೆ ಬಾಲ್ಯ ಶಾಶ್ವತವಲ್ಲ, ಯೌವನ ನಿರಂತರವಲ್ಲ, ಹಾಗೆ ಜೀವನದ ಎಲ್ಲ ಘಟ್ಟಗಳ ದಾಟಿ ಮುನ್ನಡೆಯಬೇಕು ಅದೇ ಜೀವನ...
Post a Comment